ಪ್ರಧಾನಿ ಮೋದಿ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೇಶದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಉನ್ನತ ಶಿಕ್ಷಣದ ಕಾರ್ಯಕ್ಷಮತೆ ಹೆಚ್ಚಿದೆ. ಸಂಶೋಧನಾ ಕೇಂದ್ರ ಅತ್ಯಧಿಕ ವೇಗದಲ್ಲಿ ವಿಸ್ತರಣೆಯಾಗುತ್ತಿದೆ ಎಂದು ಕ್ಯೂಎಸ್ ಜಾಗತಿಕ ವಿಶ್ವವಿದ್ಯಾಲಯ ರ್ಯಾಂಕಿಂಗ್ ವರದಿ ಹೇಳಿದೆ. ಈ ವರದಿಯಲ್ಲಿ ಕೆಲ ಭಾರತೀಯರು ಹೆಮ್ಮೆ ಪಡುವ ಕೆಲ ಅಂಶಗಳನ್ನು ಉಲ್ಲೇಖಿಸಿದೆ.
First Published Apr 22, 2024, 5:02 PM IST
ನವದೆಹಲಿ(ಏ.22) ಭಾರತದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ, ವಿಶ್ವ ದರ್ಜೆ ಮಟ್ಟದ ಸೌಲಭ್ಯಗಳ ಜೊತೆಗೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲೂ ಮಹತ್ತರ ಬದಲಾವಣೆ ತರಲಾಗಿದೆ. ಹೊಸ ಆರೋಗ್ಯ ನೀತಿ, ಶಿಕ್ಷಣ ನೀತಿಗಳಿಂದ ಈ ಕ್ಷೇತ್ರಗಳು ಇದೀಗ ವಿಶ್ವ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಇದೀಗ QS ಜಾಗತಿಕ ವಿಶ್ವವಿದ್ಯಾಲಯ ರ್ಯಾಂಕಿಂಗ್ ವರದಿ ಪ್ರಕಟಗೊಂಡಿದೆ. ಈ ವರದಿಯಲ್ಲಿ ಭಾರತದ ಉನ್ನತ ಶಿಕ್ಷಣದಲ್ಲಿನ ಕಾರ್ಯಕ್ಷಮತೆ ಅಮೂಲಾಗ್ರವಾಗಿ ಸುಧಾರಣೆ ಕಂಡಿದೆ ಎಂದಿದೆ. ಇದೇ ವೇಳೆ ಏಷ್ಯಾದಲ್ಲಿ ಚೀನಾ ಬಳಿಕ ಅತೀ ಹೆಚ್ಚು ಫೀಚರ್ಡ್ ಯೂನಿವರ್ಸಿಟಿ ಹೊಂದಿದ ದೇಶ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ವರದಿ ಹೇಳಿದೆ.
ವಿಷಯವಾರು QS ವಿಶ್ವ ವಿಶ್ವವಿದ್ಯಾಲಯದ ರ್ಯಾಂಕಿಂಗ್ ವರದಿ ಎಪ್ರಿಲ್ 10ರಂದು ಪ್ರಕಟಗೊಂಡಿದೆ. ಜಿ20 ರಾಷ್ಟ್ರಗಳ ಪೈಕಿ ಭಾರತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಮೊದಲ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಭಾರತೀಯ ಉನ್ನತ ಶಿಕ್ಷಣದಲ್ಲಿ ಶೇಕಡಾ 14 ರಷ್ಟು ಅತ್ಯಧಿಕ ಕಾರ್ಯಕ್ಷಮತೆ ಹಾಗು ಸುಧಾರಣೆಯ ಮೂಲಕ ಭಾರತ ಜಿ20 ರಾಷ್ಟ್ರಗಳ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದೆ.
4 ವರ್ಷದ ಡಿಗ್ರಿ ಪಾಸ್ ಆದ ವಿದ್ಯಾರ್ಥಿಗಳಿಗೆ ಪಿಎಚ್ಡಿಗೆ ನೇರ ಅವಕಾಶ
ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು QS ವಿಶ್ವ ವಿಶ್ವವಿದ್ಯಾಲಯದ ರ್ಯಾಂಕಿಂಗ್ ಬೆರಗುಗಣ್ಣಿನಿಂದ ನೋಡಿದೆ. ಕಾರಣ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಶೇಕಡಾ 54ರಷ್ಟು ಪ್ರಗತಿ ಸಾಧಿಸಿದೆ ಎಂದು ವರದಿ ಹೇಳುತ್ತಿದೆ. ಸಂಶೋಧನೆಯ ಉತ್ಪಾದನಾ ವಿಷಯದಲ್ಲಿ ಭಾರತ ಅತ್ಯಂತ ವೇಗವಾಗಿ ವಿಸ್ತರಿಸುವ ದೇಶಗಳ ಪೈಕಿ ಒಂದಾಗಿದೆ. 2017ರಿಂದ 2022ರ ವರೆಗೆ ಸಂಶೋಧನಾ ಕ್ಷೇತ್ರದಲ್ಲಿ ಶೇಕಡಾ 54 ರಷ್ಟು ಏರಿಕೆ ಕಂಡಿದೆ. ಇದು ಸಂಶೋಧನಾ ವಲಯದಲ್ಲಿ ವಿಶ್ವದ ನಾಲ್ಕನೇ ಅತೀ ದೊಡ್ಡ ಉತ್ಪಾದಕತೆ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವರದಿ ಹೇಳಿದೆ.
ಭಾರತದ ಶಿಕ್ಷಣ ಕ್ಷೇತ್ರದಲ್ಲಾಗಿರುವ ಈ ಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ(NEP) 2020 ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಭಾರತೀಯ ಶಿಕ್ಷಣ ಕ್ಷೇತ್ರದ ಮಟ್ಟ ಸುಧಾರಿಸುವುದು ಹಾಗೂ ಕ್ರಾಂತಿಗೊಳಿಸುವ ಬದ್ಧತೆಯನ್ನು ಪ್ರಧಾನಿ ಮೋದಿ ಅವರ ಮಾತುಗಳಲ್ಲಿ ನನಗೆ ಸ್ಪಷ್ಟವಾಗಿ ಅರಿವಾಗಿತ್ತು ಎಂದು ಕ್ಯೂಎಸ್ ಶಿಕ್ಷಣ ರ್ಯಾಂಕಿಂಗ್ ಸಂಸ್ಥೆ ಅಧ್ಯಕ್ಷ ನನ್ಝಿಯೋ ಕ್ವಾಕ್ವಾರಲಿ ಹೇಳಿದ್ದಾರೆ.
ಭಾರತದ ವಿಶ್ವವಿದ್ಯಾನಿಲಯಗಳ ಕಾರ್ಯಕ್ಷಮತೆ, ಜಾಗತಿಕ ಮಟ್ಟದಲ್ಲಿನ ಶ್ರೇಯಾಂಕಿತಗಳು ವರ್ಧಿತಗೊಂಡಿದೆ. ನಾವು 96 ದೇಶದ 1,500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು, 55 ಶೈಕ್ಷಣಿಕಾ ವಿಷಯಗಳು ಹಾಗೂ 5 ಬೋಧನಾ ವಿಭಾಗಗಳಲ್ಲಿ ವಿಶ್ಲೇಷಣಾ ಅಧ್ಯಯನ ನಡೆಸಿ ಈ ವರದಿ ತಯಾರಿಸಲಾಗಿದೆ ಎಂದು ನನ್ಝಿಯೋ ಕ್ವಾಕ್ವಾರಲಿ ಹೇಳಿದ್ದಾರೆ.
“ಕನ್ನಡ ಪಾಠ ಶಾಲೆ ದುಬೈ”ಗೆ ಕರ್ನಾಟಕ ಸರ್ಕಾರದ ಮನ್ನಣೆ..!
ಕ್ಯೂಎಸ್ ವಿಷಯ ರ್ಯಾಂಕಿಂಗ್ನಲ್ಲಿ 55 ವಿಷಗಳ ಪೈಕಿ 44 ವಿಷಗಳಲ್ಲಿ ಭಾರತ ಸ್ಥಾನ ಪಡೆದಿದೆ. ಕಂಪ್ಯೂಟರ್ ಸೈನ್ಸ್, ರಸಯಾನಶಾಸ್ತ್ರ,ಭೌತಶಾಸ್ತ್ರ, ಜೀವಶಾಸ್ತ್ರ ಸೈನ್ಸ್, ಬ್ಯೂಸಿನೆಸ್ ಸ್ಟಡೀಸ್ ಸೇರಿದಂತೆ ಕೆಲ ವಿಷಗಳಲ್ಲಿ ಭಾರತ ಅದ್ವೀತಿಯ ಸಾಧನೆ ಮಾಡಿದೆ ಎಂದು ವರದಿ ಹೇಳುತ್ತಿದೆ. ನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ನಲ್ಲಿ ಟಾಪ್ 100 ವಿಶ್ವವಿದ್ಯಾಲಯ ಪೈಕಿ ಭಾರತದ 69 ವಿಶ್ವವಿದ್ಯಾಲಯ ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.
Last Updated Apr 22, 2024, 5:02 PM IST
Credit: Source link